ಭೃಗು ಮುನಿ ಗರ್ವಭಂಗ ನಾಟಕ ಪ್ರದರ್ಶನಸುರಾಗ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಯಜ್ಞ ಅಥವಾ ಬೃಗು ಮುನಿ ಗರ್ವಭಂಗ ಎಂಬ ಸುಂದರ ಪೌರಾಣಿಕ ನಾಟಕವನ್ನು ನ.೨೩ರಂದು ಬೆಳಗ್ಗೆ ೧೧.೩೦ಗಂಟೆಗೆ ನಡೆಯಲಿದೆ ಎಂದು ಸುರಾಗ ಟ್ರಸ್ಟ್ ಅಧ್ಯಕ್ಷ ಮಂಜು ಮಟ್ಟನವಿಲೆ ಹಾಗೂ ರಂಗಭೂಮಿ ಕಲಾವಿದರಾದ ಪಂಡಿತ್ ಕೃಷ್ಣಮೂರ್ತಿ ತಿಳಿಸಿದರು. ದಕ್ಷಯಜ್ಞ ನಾಟಕವನ್ನು ನಮ್ಮ ಟ್ರಸ್ಟ್ ವತಿಯಿಂದ ಮಾತ್ರ ಪ್ರದರ್ಶಿಸುತ್ತಿದ್ದು, ಈ ನಾಟಕವನ್ನು ಎರಡನೇ ಬಾರಿಗೆ ನಡೆಸುತ್ತಿದ್ದು ಅಧ್ಯಕ್ಷತೆಯನ್ನು ಶಾಸಕ ಸಿ. ಎನ್. ಬಾಲಕೃಷ್ಣ ವಹಿಸುವರು. ಉದ್ಘಾಟನೆಯನ್ನು ರಂಗಭೂಮಿ ಕಲಾವಿದ ಎಂ. ಬಿ. ಗಂಗರಾಜ್ ಪಟೇಲ್ ವಹಿಸಲಿದ್ದಾರೆ.