ಸೇವಾ ಮನೋಭಾವದ ಶಿಕ್ಷಣ ಸಂಸ್ಥೆಗಳು ವಿರಳಇಂದು ಶಿಕ್ಷಣ ವಾಣಿಜ್ಯೋದ್ಯಮವಾಗಿ ಪರಿವರ್ತನೆಗೊಳ್ಳುತ್ತಿರುವ ಕಾಲಘಟ್ಟದಲ್ಲಿ, ಸೇವಾ ಮನೋಭಾವದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ವತಮ್ಮ ಶಾಲೆ ಶ್ಲಾಘನೀಯ ಎಂದು ನ್ಯಾಯವಾದಿ ಕೆ.ಎಸ್ ಲೋಕೇಶ್ ಕುಮಾರ್ ಅಭಿಪ್ರಾಯಪಟ್ಟರು. ಪೋಷಕರು ಮಗು ಮನೆಯಲ್ಲಿ ಏನು ಬರೆಯುವುದಿಲ್ಲ, ಓದುವುದಿಲ್ಲ ಎಂದು ಹೇಳಿದರೆ ಆ ಚಿಂತೆ ಬಿಡಿ ಅವರು ಇವತ್ತಲ್ಲ ನಾಳೆ ಬರೆಯುತ್ತಾರೆ. ಮಕ್ಕಳ ಮೇಲೆ ಒತ್ತಡವನ್ನು ಖಂಡಿತ ಹಾಕಬೇಡಿ. ನಿಮ್ಮ ಮಗು ಚೆನ್ನಾಗಿ ಓದುತ್ತದೆ ನಮಗೆ ಸ್ಪಂದಿಸುತ್ತಿದೆ ಎಂದು ಹೇಳಿ ಕಳುಹಿಸುತ್ತಾರೆ ಎಂದರು.