ಮಳೆ ನಡುವೆ ಕಾಡಾನೆಗಳ ಉಪಟಳ ಬೇಲೂರು ತಾಲೂಕಿನಲ್ಲಿ ವಿಪರೀತ ಮಳೆಯ ನಡುವೆ ಅರೇಹಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಕಾಡಾನೆಗಳ ಗುಂಪು ಗ್ರಾಮದ ಚಂದ್ರವತಿ, ಶಂಕರ, ಸಂಕಪ್ಪ, ಸಂತೋಷ್ ಶೆಟ್ಟಿರವರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡಿದೆ, ಇದರಿಂದ ಬೇಸೆತ್ತ ಚಂದ್ರವತಿಯವರು ಕಾಡಾನೆಗಳ ಹಾವಳಿಯಿಂದ ನಿಯಂತ್ರಿಸಿಕೊಳ್ಳಲು ತಾನು ಬೆಳೆದಿದ್ದ ಬಾಳೆ ಗಿಡಗಳನ್ನು ಸ್ವತಃ ತಾನೇ ಕಡಿದು ಹಾಕಿದ್ದಾರೆ.