ಕಾಡು ನಾಶ ನಿಲ್ಲಿಸದಿದ್ರೆ ನ್ಯಾಯಾಲಯದ ಮೊರೆ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೇರಳವಾದ ಅರಣ್ಯ ಸಂಪತ್ತಿದ್ದು, ಕೆಲವು ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಅಕ್ರಮ ಕಾಡು ಒತ್ತುವರಿ, ಕಾಡು ನಾಶ ನಿರಂತರವಾಗಿ ನಡೆದಿದ್ದು, ತಕ್ಷಣ ಕಾನೂನು ಕ್ರಮ ಕೈಗೊಳ್ಳದಿದ್ದರೇ ಅರಣ್ಯ ಉಳಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯದ ಕದ ತಟ್ಟುವ ಕಾರ್ಯಕ್ಕೆ ಚಾಲನೆ ಕೊಡಲಾಗುವುದು ಎಂದು ವಾಯ್ಸ್ ಆಫ್ ಪಬ್ಲಿಕ್‌ನ ಸಂಸ್ಥಾಪಕ ಮತ್ತು ವಕೀಲರಾದ ಎನ್.ಪಿ. ಅಮೃತೇಶ್ ಎಚ್ಚರಿಸಿದರು.