ಆಟಗಳ ಮೂಲಕ ಮಕ್ಕಳಿಗೆ ಕಲಿಸಲು ಮುಂದಾಗಿಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಿ, ಆ ದಿಕ್ಕಿನಲ್ಲೇ ಶಿಕ್ಷಣ ನೀಡುವಲ್ಲಿ ಶಾಲೆಗಳು ಮಂದಾಗಬೇಕು, ಇದರಿಂದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಸಾಧ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ತಿಳಿಸಿದರು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು. ಅವರಿಗಾಗಿ ಆಸ್ತಿ ಮಾಡಿಟ್ಟರೇ ಕಳ್ಳಕಾಕರ ಭಯವಿರುತ್ತದೆ. ಶಿಕ್ಷಣವನ್ನೆ ಆಸ್ತಿಯಾಗಿ ಕೊಟ್ಟರೇ ಸಮಾಜದಲ್ಲಿ ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಬದುಕು ರೂಪಿಸಿಕೊಳ್ಳುತ್ತಾರೆ ಎಂದರು.