ಮಳೆಗಾಲ ಬಂದರೂ ಚರಂಡಿ ಸ್ವಚ್ಛತೆಯತ್ತ ಗಮನ ಹರಿಸದ ನಗರಸಭೆಮಳೆಗಾಲ ಸಮೀಪಿಸಿದರೂ ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಚರಂಡಿ ದುರಸ್ತಿ, ಸ್ವಚ್ಛತೆಯತ್ತ ನಗರಸಭೆ ಅಧಿಕಾರಿಗಳು ಗಮನ ಹರಿಸಿಲ್ಲ. ನಗರದಲ್ಲಿನ ರಾಜಕಾಲುವೆ, ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು, ಮಳೆಯಾದರೆ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯವಾಗಿದೆ.