ನಾವು ರಾಜ್ಯಪಾಲರನ್ನು ಅವಮಾನಿಸಿಲ್ಲ -ಬಿ.ಕೆ. ಹರಿಪ್ರಸಾದ್ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ, ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಆಗುವ ರೀತಿ ನಡೆದುಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಸಂವಿಧಾನದ ಮುಖ್ಯಸ್ಥರಾಗಿ ಬಿಜೆಪಿಯವರ ನಿರ್ದೇಶನದಂತೆ ಅವರು ಕ್ರಮ ಜರುಗಿಸಲು ಆಗಲ್ಲ, ಹೀಗಾಗಿ ಪ್ರತಿಭಟನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.