ದೇಶದ ಜನತೆಗೆ ಶಾಶ್ವತ ಗ್ಯಾರಂಟಿ ನೀಡಿರುವ ಮೋದಿ -ಮಾಜಿ ಸಚಿವ ಬಿಸಿಪಾನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶಾಶ್ವತ ಗ್ಯಾರಂಟಿಗಳನ್ನು ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ದೇಶದ ಜನತೆಗೆ ವ್ಯಾಕ್ಸಿನ್ ನೀಡಿ ಜನರ ಆರೋಗ್ಯ ಕಾಪಾಡಿದ್ದಾರೆ. ಕಿಸಾನ್ ಸಮ್ಮಾನ್, ರಕ್ಷಣಾ ಕ್ಷೇತ್ರದಲ್ಲಿ ಪ್ರಗತಿ, ಆಯುಷ್ಮಾನ್ ಭಾರತ್ ಅಂತಹ ಯೋಜನೆಗಳನ್ನು ನೀಡಿ ದೇಶದ ಜನತೆಗೆ ಶಾಶ್ವತ ಗ್ಯಾರಂಟಿ ನೀಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.