ರಾಜ್ಯಕ್ಕೆ ಅನ್ಯಾಯವಾದರೂ ಬಾಯಿ ಬಿಡದ ಬಿಜೆಪಿ ಸಂಸದರು: ವಿನಯ ಕುಲಕರ್ಣಿಕೇಂದ್ರ ಸರ್ಕಾರ ಬರೀ ನಾಲ್ವರು ಶ್ರೀಮಂತ ಉದ್ಯಮಿಗಳ ಬರೋಬ್ಬರಿ 4 ಲಕ್ಷ 36 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಬಡವರು, ರೈತರು, ದೀನ ದಲಿತರ ಬಗ್ಗೆ ಬಿಜೆಪಿಗೆ ಎಳ್ಳಷ್ಟೂ ಕಾಳಜಿ ಇಲ್ಲ. ದುರುದ್ದೇಶದ ರಾಜಕಾರಣ ಮಾಡಲಾಗುತ್ತಿದೆ ಎಂದು ವಿನಯ ಕುಲಕರ್ಣಿ ಆರೋಪಿಸಿದ್ದಾರೆ.