ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಮಾಡಿ ಬಿಜೆಪಿ ಹೇಗೆ ಮತಯಾಚಿಸುತ್ತದೆ?ಬರ ಪರಿಹಾರ, ನ್ಯಾಯಸಮ್ಮತ ಅನುದಾನ ಬಿಡುಗಡೆಯಲ್ಲಿ ಅನ್ಯಾಯ, ಬರಗಾಲವಿದ್ದರೂ ನರೇಗಾ ಕೆಲಸದ ದಿನಗಳ ಹೆಚ್ಚಳಕ್ಕೆ ಸಿಗದ ಅನುಮತಿ ಹೀಗೆ ರಾಜ್ಯಕ್ಕೆ ಸಾಲು, ಸಾಲು ಅನ್ಯಾಯ, ಮೋಸ ಮಾಡುತ್ತಿರುವ ಬಿಜೆಪಿ ಅದ್ಯಾವ ಮುಖ ಹೊತ್ತು ಮತಯಾಚಿಸುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಪ್ರಶ್ನಿಸಿದ್ದಾರೆ.