ಬ್ಯಾಡಗಿ ತಾಲೂಕಿನ ಶೇ. 50ರಷ್ಟು ಗ್ರಾಮಗಳಲ್ಲಿ ನೀರಿನ ಅಭಾವಮುಂಗಾರು ಮತ್ತು ಹಿಂಗಾರು ಕೈಕೊಟ್ಟು ಬರಪೀಡಿತವೆಂದು ಘೋಷಿಸಿದ ತಾಲೂಕಿನ ಶೇ. 50ರಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆಗಳನ್ನು ತುಂಬಿಸುವ ಆಣೂರು ಏತ ನೀರಾವರಿ ಮಹಾತ್ವಾಕಾಂಕ್ಷಿ ಯೋಜನೆ ಪ್ರಸಕ್ತ ಬರಗಾಲದಲ್ಲಿ ತಾಲೂಕಿನ ಜನರಿಗೆ ನೆರವಿಗೆ ಬರುವ ಯಾವುದೇ ಲಕ್ಷಣಗಳಿಲ್ಲ, ಹೀಗಾಗಿ ರೈತರ ಬಾಡಿಗೆ ಕೊಳವೆ ಬಾವಿಗಳೇ ಗತಿ ಎನ್ನುವಂತಾಗಿದೆ.