ರಸ್ತೆ ಅವ್ಯವಸ್ಥೆ, ಭತ್ತ ನಾಟಿ ಮಾಡಿ ಪ್ರತಿಭಟನೆಮಳೆ ಬಂದರೆ ರಾಡಿ ಗುಂಡಿಯಲ್ಲಿ ಸರ್ಕಸ್ ನಡಿಗೆ, ಬೇಸಿಗೆ ಬಂದರೆ ಧೂಳುಮಯ, ಬಸ್ ನಿಲ್ದಾಣ ತಿಪ್ಪೆಯಾಗಿದೆ, ಹತ್ತಾರು ವರ್ಷಗಳಿಂದ ರಸ್ತೆ ದುರಸ್ತಿ ಇಲ್ಲ, ಅಧಿಕಾರಿಗಳಿಗೆ ಕೊಟ್ಟ ಮನವಿಗಳು ಫಲ ನೀಡಿಲ್ಲ, ನೋಡ ಬನ್ನಿ ಹಾನಗಲ್ಲ ತಾಲೂಕಿನ ಹೊಸೂರು ಗ್ರಾಮದ ಪ್ರಮುಖ ರಸ್ತೆ ಎಂದು ಸಾರ್ವಜನಿಕರು, ಕರ್ನಾಟಕ ರಕ್ಷಣಾ ವೇದಿಕೆ ರಸ್ತೆಯಲ್ಲಿ ಭತ್ತದ ನಾಟಿ ಮಾಡಿ ಪ್ರತಿಭಟನೆ ನಡೆಸಿದ್ದಾರೆ.