ಪುಸ್ತಕ ಬದುಕಿನ ಬಹುದೊಡ್ಡ ಸಂಗಾತಿ-ಡಾ. ವಿಜಯಲಕ್ಷ್ಮಿಪುಸ್ತಕ ಬದುಕಿನ ಬಹುದೊಡ್ಡ ಸಂಗಾತಿಯಾಗಿದ್ದು, ಮನಸ್ಸಿಗೆ ಮುದ ನೀಡಿ ಬದುಕಿನಲ್ಲಿ ಭರವಸೆಗಳನ್ನು ಬಿತ್ತುತ್ತವೆ. ಸಾಹಿತ್ಯದ ಓದು ನಮ್ಮನೆಂದೂ ಕೈಬಿಡುವುದಿಲ್ಲ. ನಮ್ಮ ಬದುಕಿನ ಅನೇಕ ತವಕ ತಲ್ಲಣಗಳಿಗೆ ಉತ್ತರ ನೀಡುತ್ತದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ವಿಜಯಲಕ್ಷ್ಮಿ ತಿರ್ಲಾಪುರ ತಿಳಿಸಿದರು.