ಲೋಕಸಭಾ ಚುನಾವಣೆ: ಚೆಕ್ ಪೋಸ್ಟ್ ಚಟುವಟಿಕೆ ಪರಿಶೀಲಿಸಿದ ಡೀಸಿಚುನಾವಣಾ ಅಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ತೀವ್ರ ನಿಗಾವಹಿಸಿದ್ದು, ನೀತಿ ಸಂಹಿತೆ ಜಾರಿಗೆ ಬಂದ ಶನಿವಾರದಿಂದಲೇ ಎಲ್ಲ ಚೆಕ್ಪೋಸ್ಟ್ಗಳಲ್ಲಿ ನಿಯೋಜಿತ ಸಿಬ್ಬಂದಿಗಳು ಕಾರ್ಯನಿರತವಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ನಗರದ ಆರ್ಟಿಓ ಬಳಿ, ಹಾನಗಲ್ ತಾಲೂಕು ಗೊಂದಿ, ಹೈಳ್ಳಿಬೈಲ್ ಸೇರಿದಂತೆ ವಿವಿಧ ಚೆಕ್ ಪೋಸ್ಟ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.