ಪ್ರಶಿಕ್ಷಣಾರ್ಥಿಗಳು ಡಾ. ಅಂಬೇಡ್ಕರ್ ಜೀವನ ಚರಿತ್ರೆ ಅರಿಯಲಿ-ಚಿನ್ನಿಕಟ್ಟಿವರ್ಗ ಸಂಘರ್ಷ, ಜಾತೀಯತೆ ತೊಲಗಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಜೀವನ ಪೂರ್ತಿ ಶ್ರಮಿಸಿದ್ದು ಅವರ ಜೀವನ ಚರಿತ್ರೆ, ರಚಿಸಿರುವ ಸಂವಿಧಾನದ ಬಗ್ಗೆ ಪ್ರಶಿಕ್ಷಣಾರ್ಥಿಗಳು ಕಡ್ಡಾಯವಾಗಿ ತಿಳಿದುಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.