ಶಿಕ್ಷಣದಿಂದ ಮಾತ್ರ ಜಗತ್ತಿನ ಸವಾಲುಗಳ ಎದುರಿಸಲು ಸಾಧ್ಯ-ಕೆ.ಎಸ್. ಈಶ್ವರಪ್ಪಶಿಕ್ಷಣವು ಜ್ಞಾನದ ಹೆಬ್ಬಾಗಿಲು, ಇದರಲ್ಲಿ ನಮ್ಮೆಲ್ಲರ ಆಕಾಂಕ್ಷೆಗಳನ್ನು ಸಬಲಗೊಳಿಸುವ ಹಾಗೂ ಪರಿವರ್ತನೆಗೊಳಿಸುವ ಶಕ್ತಿಯಿದೆ. ಹೀಗಾಗಿ ಪ್ರತಿಯೊಂದು ಕುಟುಂಬ ಶಿಕ್ಷಣವನ್ನೇ ಸಾಮಾಜಿಕ ಭದ್ರತೆಯನ್ನಾಗಿ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ನೈಜ ಜಗತ್ತಿನ ಸವಾಲುಗಳನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಬರಲಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಭಿಪ್ರಾಯ ವಕ್ತಪಡಿಸಿದರು.