ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಶ್ರೀನಿವಾಸ ಮಾನೆತೆರಿಗೆ ಮತ್ತು ಸುಂಕದ ಮೂಲಕ ಕನ್ನಡಿಗರು ಪ್ರತಿವರ್ಷ ಕೇಂದ್ರ ಸರ್ಕಾರಕ್ಕೆ ₹ 4.50 ಲಕ್ಷ ಕೋಟಿ ಭರಿಸುತ್ತಿದ್ದಾರೆ. ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ ಕೇವಲ ₹ 45,000 ಕೋಟಿ ಮತ್ತು ಸಹಾಯಧನವಾಗಿ ₹ 15,000 ಕೋಟಿ ನೀಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.