ಕ್ರಿಯಾಶೀಲ ಚಿಂತನೆ ಮಾಡದ ಯುವಕರಿಂದ ದೇಶ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ-ಡಾ. ವೈದ್ಯಕ್ರಿಯಾಶೀಲ ಚಿಂತನೆ ಮಾಡದೇ ಗುಲಾಮಗಿರಿಗೆ ಒಳಗಾಗುತ್ತಿರುವ ದೇಶದ ಯುವಕರು ಕೇಸರಿ, ಕೆಂಪು, ನೀಲಿ, ಹಸಿರು, ಬಿಳಿ ಬಾವುಟಗಳ ಮುಖವಾಡಗಳಲ್ಲಿ ಹುದುಗಿ ಹೋಗುತ್ತಿದ್ದಾರೆ. ಇಂತಹವರಿಂದ ದೇಶ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಕಳೆದ ಏಳೆಂಟು ದಶಕಗಳ ಹಿಂದೆ ದೇಶದ ಯುವಕರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದು ಬಿಇಎಸ್ ಎಂ ಕಾಲೇಜು ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ಅಭಿಪ್ರಾಯ ವ್ಯಕ್ತಪಡಿಸಿದರು.