ಸಂಭ್ರಮದ ಗಂಗಾಜಲ ಚೌಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆಇಲ್ಲಿನ ತಳವಾರ ಗಲ್ಲಿಯ ಮೂಲದೇವಸ್ಥಾನದಿಂದ ಶೃಂಗರಿಸಿದ ರಥದಲ್ಲಿ ನಗರದ ಗ್ರಾಮದೇವತೆ ಗಂಗಾಜಲ ಚೌಡೇಶ್ವರಿದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸೋಮವಾರ ರಾತ್ರಿ ಪ್ರಾರಂಭಗೊಂಡಿತು. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.