ಭೀಮಾ ತೀರದಲ್ಲಿ ಪ್ರಿಯಾಂಕ್, ಡಿಸಿ ವಿರುದ್ಧ ಭುಗಿಲೆದ್ದ ಆಕ್ರೋಶನೀರಿಗಾಗಿ ಮುಂದುವರಿದ ಉಪವಾಸ, ವನವಾಸ, ಆಮರಣಾಂತ ಉಪವಾಸ ಕುಳಿತಿದ್ದ ಶಿವು ನಾಟೀಕಾರ್ ಆರೋಗ್ಯ ಕ್ಷೀಣ, ವಿಜಯಪುರಕ್ಕೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೋರಾಟದ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಹೋರಾಟ ಸಮಿತಿ ಮುಖ್ಯಸ್ಥ ಚಿದಾನಂದ ಮಠ ಆಕ್ರೋಶ ಹೊರಹಾಕಿದ್ದಾರೆ.