ತವರು ಜಿಲ್ಲೆಯಲ್ಲಿ ಪೊಲೀಸ್ ಕಮೀಶ್ನರ್ ಆಗಿ ಶರಣಪ್ಪ ಅಧಿಕಾರಕಲಬುರಗಿಗೆ ಕಮೀಶ್ನರೇಟ್ ಬಂತು, ಮೊದ್ಲು ಒಬ್ರೇ ಐಪಿಎಸ್ (ಎಸ್ಪಿ) ಅಧಿಕಾರಿ ಇದ್ದ ಕಡೆ ನಾಲ್ಕಾರು ಮಂದಿ ಐಪಿಎಸ್ ಅಧಿಕಾರಿಗಳು ಬಂದ್ರೂ ಕ್ರೈಂಗಳು ಕಮ್ಮಿ ಆಗಲಿಲ್ಲ, ಕಳವು, ಸುಲಿಗೆಗಳಿಗೂ ನಿರೀಕ್ಷಿತ ಮೂಗುದಾರ ಬೀಳಲಿಲ್ಲ, ದಶಕ ಗತಿಸಿದರೂ ಜನಸ್ನೇಹಿ ಪೊಲೀಸಿಂಗ್ ಇಲ್ಲಿನ್ನೂ ಕನಸಿನ ಮಾತು, ಇಲ್ಲಿನ ಪೊಲೀಸ್ರು ವಿಐಪಿಗಳು, ಮಂತ್ರಿಗಳು ಬಂದಾಗ ಸುತ್ತಮುತ್ತ ಕಾಣ್ತಾರ, ರಾತ್ರಿ ಗಸ್ತು ಅಷ್ಟಕ್ಕಷ್ಟೆ, ಸಿಟಿ ಟ್ರಾಫಿಕ್ ಬಗ್ಗೆ ಮಾತಾಡೋದೇ ಬೇಡ....