ಬಿರುಸಿನ ಮಳೆಗೆ ತೊಗರಿ ಫಸಲು ನೀರು ಪಾಲುಅಫಜಲ್ಪುರ, ಕಲಬುರಗಿ, ಆಳಂದ,, ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ಆಯ್ದ ಹೋಬಳಿಗಳಲ್ಲಿ ಸೋಮವಾರ ರಾತ್ರಿ 2 ಗಂಟೆ ಕಾಲ ಸತತ ಸುರಿದ ಬಿರುಸಿನ ಮಳೆಗೆ ಆಯಾ ಪ್ರದೇಶದಲ್ಲಿನ ಹತ್ತಾರು ಹಳ್ಳಿಗಳ ವ್ಯಾಪ್ತಿಯ ನೂರಾರು ಎಕರೆಯಲ್ಲಿ ಬೆಳೆದು ನಿಂತು ನಳನಲಿಸುತ್ತಿದ್ದ ತೊಗರಿ ಫಸಲು, ಹೆಸರು, ಉದ್ದು, ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಗಳು ಮಳೆ ನೀರು ಪಾಲಾಗಿದೆ.