ಕಲಬುರಗಿಯಲ್ಲಿಂದು ಸಾಧಕ ಕಲಾವಿದರಿಗೆ ರಂಗಸಂಗಮ ಪ್ರಶಸ್ತಿ ಪ್ರದಾನಕಲಬುರಗಿ ಭಾಗದಲ್ಲಿ ರಂಗಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ರಂಗ ಸಂಗಮ ಕಲಾ ಸಂಸ್ಥೆ ತನ್ನ ವಾರ್ಷಿಕ ರಂಗ ಪುರಸ್ಕಾರ ಪ್ರದಾನಕ್ಕೆ ಸಜ್ಜಾಗಿದೆ. ಜು.18ರಂದು ಬೆ.10.30ಕ್ಕೆ ಎಸ್.ಬಿ. ಜಂಗಮಶೆಟ್ಟಿ, ಸುಭದ್ರಾದೇವಿ ಜಂಗಮಶೆಟ್ಟಿ ಸ್ಮರಣಾರ್ಥ ರಾಜ್ಯ ಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.