ಆಳಂದ ತಾಲೂಕಲ್ಲಿ ಆಡಳಿತ ಯಂತ್ರ ಕುಸಿದಿದೆಜಿಲ್ಲೆಯ ಆಳಂದ ಮತಕ್ಷೇತ್ರದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ, ಪೊಲೀಸರು, ತಾಪಂ, ಪಪಂ ಸಂಸ್ಥೆಗಳಲ್ಲಿರುವವರು ಜನಪರವಾಗಿ ಕೆಲಸಕ್ಕೆ ಮುಂದಾಗದೆ ರಾಜಕೀಯವಾಗಿ ಪ್ರಭಾವಿಗಳದ್ದೆ ಕಾರುಬಾರು, ಹಾಲಿ ಶಾಸಕರು, ಅವರ ಬಂಧುಗಳೇ ಇಲ್ಲಿ ಬೇಕಾಬಿಟ್ಟಿ ಕೆಲಸಗಳನ್ನು ಅಧಿಕಾರಿಗಳಿಂದ ಮಾಡಿಸುತ್ತ ಹಗರಣಗಳಿಗೂ ಕಾರಣರಾಗುತ್ತಿದ್ದಾರೆಂದು ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದರ್, ಬಿಜೆಪಿ ಮುಖಂಡ ಹಣಮಂತಾರಯ ಮಾಲಾಜಿ ದೂರಿದ್ದಾರೆ.