ಬಡವರ ಬದುಕಿಗೆ ನೆಮ್ಮದಿ ನೀಡಿದ ಗ್ಯಾರಂಟಿ ಯೋಜನೆಗಳುನುಡಿದಂತೆ ನಡೆದ ಮುಖ್ಯಮಂತ್ರಿ, ಗ್ಯಾರಂಟಿ ಯೋಜನೆಗಳ ಜತೆಗೆ ದಾಖಲೆಯ ಸರ್ವಶ್ರೇಷ್ಠ ಬಜೆಟ್ ನೀಡಿರುವುದು ಎದುರಾಳಿಗಳ ನಿದ್ದೆಗೆಡಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಹೇಳುತ್ತಿರುವ ಬಿಜೆಪಿಯವರು ಈಗ ತಬ್ಬಿಬ್ಬಾಗಿದ್ದಾರೆ ಎಂದು ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಹೇಳಿದ್ದಾರೆ. ಕೊಪ್ಪಳ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದ್ದಾರೆ.