ಅಂಜನಾದ್ರಿಯಲ್ಲಿ ಅರ್ಚಕರಿಗೆ ಪೂಜೆ ಮೊಟಕು: ಡಿಸಿ ವಿರುದ್ಧ ಸುಪ್ರೀಂ-ಹೈಕೋರ್ಟ್, ಸಿಎಸ್‌ಗೆ ದೂರುನನಗೆ ಪೂಜೆ ಮಾಡಲು ಅವಕಾಶ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕೆಂದು ಕೋರ್ಟ್ ಆದೇಶಿಸಿದೆ. ಆದರೂ ಸಹ ಭಾನುವಾರ ಅಂಜನಾದ್ರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅವರು ಬೇರೆ ಅರ್ಚಕರಿಂದ ಪೂಜೆ ಮಾಡಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಸಿಎಸ್ ಹಾಗೂ ಸುಪ್ರೀಂ ಕೋರ್ಟ್, ಧಾರವಾಡ ಹೈಕೋರ್ಟ್‌ಗೆ ತಮ್ಮ ವಕೀಲರಿಂದ ವಿದ್ಯಾದಾಸ್ ಬಾಬಾ ದೂರು ಸಲ್ಲಿಸಿದ್ದಾರೆ.