ಬಿಎಸ್ಪಿಎಲ್ ಕಾರ್ಖಾನೆ: ಸರ್ವಪಕ್ಷ ಸಭೆ ನಿರ್ಣಯದತ್ತ ಹೋರಾಟಗಾರರ ಚಿತ್ತಬೃಹತ್ ಹೋರಾಟದ ಬಳಿಕ ಗವಿಸಿದ್ಧೇಶ್ವರ ಸ್ವಾಮೀಜಿ ಕಟ್ಟಪ್ಪಣೆ ಮಾಡಿ, ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸಲು ಬಿಎಸ್ಪಿಎಲ್ಗೆ ಅನುಮತಿ ನೀಡಿರುವುದನ್ನು ರದ್ದು ಮಾಡಿಸಲು ಹೇಳಿರುವುದರಿಂದ ಈ ಸಭೆಗೆ ಭಾರಿ ಮಹತ್ವ ಬಂದಿದೆ. ಇದೇ ಕಾರಣಕ್ಕಾಗಿ ಪಕ್ಷಾತೀತವಾಗಿ ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.