ರೈತರ ಆಕ್ರೋಶಕ್ಕೆ ಮಣಿದು ಕಾಲುವೆಗೆ ನೀರು ಹರಿಸಿದ ಅಧಿಕಾರಿಗಳುಒಂದೆಡೆ ನದಿಗೆ ಅಪಾರ ಪ್ರಮಾಣದ ನೀರು ಹಾಗೂ ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ. ಕೊಪ್ಪಳ ಶಾಸಕ, ಸಂಸದರ ಊರು ಸೇರಿ 10 ಹಳ್ಳಿ ಹಾಗೂ 20,000 ಎಕರೆ ಪ್ರದೇಶಕ್ಕೆ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ನೀರುಣಿಸುತ್ತದೆ. ಆದರೆ, ಅಧಿಕಾರಿಗಳ ತಪ್ಪಿನಿಂದ ಟ್ಯಾಂಕರ್ ನೀರು ತಂದು ಸಸಿ ನಾಟಿ ಮಾಡಬೇಕಾದ ಪರಿಸ್ಥಿತಿ ಇದೆ.