ಫೆ. 8ರಂದು ಕುಕನೂರಲ್ಲಿ ಸಹಕಾರ ಜಾಗೃತಿ ಸಮಾವೇಶಕುಕನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಫೆ. 8ರಂದು ಸಹಕಾರ ಜಾಗೃತಿ ಸಮಾವೇಶ ಜರುಗಲಿದೆ. ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರಿಗೆ ಸಹಕಾರ ರಂಗದ ಕುರಿತು ಜಾಗೃತಿ ಮೂಡಿಸುವ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ.