ಸಂಗೀತ - ಸಾಹಿತ್ಯ ಜೀವಂತವಾಗಿರಲು ಕಲೆ ಅನಾವರಣಗೊಳ್ಳಬೇಕು: ಕೆ.ಕಲ್ಯಾಣ್ಸಂಗೀತ-ಸಾಹಿತ್ಯ, ಸಾಂಸ್ಕೃತಿಕ ಸೊಗಡಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಇಂತಹ ವೇದಿಕೆ ಬೇಕಾಗಿವೆ. ಕಮರ್ಷಿಯಲ್ ಸಭೆ-ಸಮಾರಂಭ ಮಾಡಿದರೂ ಜನ ಸೇರಲ್ಲ. ಸಂಗೀತ, ಕಲಾ ಕಾರ್ಯಕ್ರಮಗಳಲ್ಲಿ ಕಲಾಮಂದಿರಕ್ಕೆ ತುಂಬಿರುವ ಜನರನ್ನು ನೋಡಿದರೆ ಇವರಲ್ಲಿರುವ ಸಂಗೀತದ ಪ್ರೀತಿ, ಗೌರವ ಎಷ್ಟಿದೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ.