ಭಕ್ತಿ ಪ್ರಧಾನವಾಗಿ ನಡೆಯುತ್ತಿರುವ ಉಮಾಮಹೇಶ್ವರಿ ದೊಡ್ಡಹಬ್ಬಗ್ರಾಮ ದೇವತೆಗಳಾದ ಉಮಾಮಹೇಶ್ವರಿ, ಚೌಡಮ್ಮ, ಮಂಚಮ್ಮ, ಸೇರಿದಂತೆ ವಿವಿಧ ದೇವತೆಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಉಮಾ ಮಹೇಶ್ವರಿ ಅರ್ಚಕ ಚಿಕ್ಕಲಿಂಗಯ್ಯ ಅವರಿಗೆ ಒಕ್ಕಲಿನ 12 ತಂಡೆಯವರು 12 ಬಣ್ಣದ ಬಟ್ಟೆಯನ್ನು ಕಟ್ಟಿ ತಮಟೆ ತಾಳಕ್ಕೆ ಕುಣಿಸುವುದರ ಮೂಲಕ 12 ಸೆರಗು ವೇಷಾಧಾರಿ ಸಂಪ್ರದಾಯಕ್ಕೆ ಮುನ್ನುಡಿ ಬರೆದರು.