ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀಪಟ್ಟಲದಮ್ಮ ಸಿಡಿ ಹಬ್ಬ ಯಶಸ್ವಿಹಬ್ಬದ ಪ್ರಮುಖ ಆಕರ್ಷಣೆ ಘಟ್ಟ ಮೆರವಣಿಗೆ ಕಾಲ ಮಿತಿಯೊಳಗೆ ನಡೆಯಿತು. ಮೊದಲಿಗೆ ಪೇಟಿ ಬೀದಿ, ಸಿದ್ಧಾರ್ಥ ನಗರ, ಗಂಗಮತಸ್ಥ, ಅಶೋಕ್ ನಗರ, ಕೀರ್ತಿ ನಗರ, ಬಸವಲಿಂಗಪ್ಪ ನಗರದ ಮಹಿಳೆಯರು ಘಟ್ಟ ಮೆರವಣಿಗೆಯಲ್ಲಿ ಸಾಗಿ ಪಟ್ಟಲದಮ್ಮ ದೇವರಿಗೆ ಪೂಜೆ ಸಲ್ಲಿಸಿದರು. ಪಟ್ಟಣದ ಅನಂತ್ ರಾಂ ವೃತ್ತದಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ ಈಡಗಾಯಿ ಹೊಡೆದು ನಮಿಸಿ, ಮೆರವಣಿಗೆಗೆ ಚಾಲನೆ ನೀಡಿದರು.