ಫಲಿಸದ ಮಾಜಿ ಶಾಸಕರ ಷಡ್ಯಂತ್ರ: ಎಸ್.ಪಿ.ಸ್ವಾಮಿನಾನು ಬಿಜೆಪಿ ಪಕ್ಷದ ರಾಜ್ಯ ನಾಯಕರ ಅನುಮತಿ ಪಡೆದೇ ಚುನಾವಣೆಗೆ ಸ್ಪರ್ಧಿಸಿದ್ದೆ. ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಪಾಧ್ಯಕ್ಷ ಸುರಾನ ಇವರು ಒಪ್ಪಿಗೆ ನೀಡಿದ್ದರಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ, ಮಾಜಿ ಶಾಸಕರು ನಮ್ಮ ಪಕ್ಷದ ಕೆಲವು ಮುಖಂಡರ ದಾರಿ ತಪ್ಪಿಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿ ಅವರ ಬೆಂಬಲಿತ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ.