ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗೆ ಅರಿವು ಅಗತ್ಯ: ಡಾ.ಸುಜಯ್ ಕುಮಾರ್ವಿಶ್ವದ 9,800 ಪಕ್ಷಿ ಪ್ರಭೇದಗಳ ಪೈಕಿ ಶೇ.12ರಷ್ಟು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. ವಿಶ್ವದ 330 ಗಿಣಿ ಜಾತಿಯ ಪಕ್ಷಿಗಳು ಸಹ ಮೂರನೇ ಒಂದು ಭಾಗದಷ್ಟಿವೆ. ಅನೇಕ ಅಪರೂಪದ ಪಕ್ಷಿಗಳು ಜನರು ಅಕ್ರಮ ಸಾಗಣೆ, ಮಾರಾಟ, ಕಾಯಿಲೆಯಿಂದಾಗಿ ಅಳಿವಿನ ಅಂಚಿಗೆ ಸಾಗುತ್ತಿವೆ. ಇಂತಹ ಪಕ್ಷಿಗಳ ಉಳಿವಿಗಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.