ಪಿಗ್ಮಿ, ಎಫ್‌ಡಿ ಹಣ ವಾಪಸ್ ನೀಡುವಂತೆ ಮಹಿಳೆಯರ ಪ್ರತಿಭಟನೆಕಸಬಾ ಸೊಸೈಟಿ ವ್ಯಾಪ್ತಿಯಲ್ಲಿ ಬರುವ ಪಾಂಡವಪುರ ಪಟ್ಟಣ, ಬೀರಶೆಟ್ಟಹಳ್ಳಿ, ಹಾರೋಹಳ್ಳಿ, ಹಿರೇಮರಳಿ, ಬನಘಟ್ಟ ಗ್ರಾಮಗಳಿಂದ ಅಂದಾಜು 1500ಕ್ಕೂ ಅಧಿಕ ಮಂದಿ ರೈತರು, ಗ್ರಾಹಕರು 45 ಲಕ್ಷ ರು.ಗಳಿಗೂ ಅಧಿಕ ಪಿಗ್ಮಿ ಕಟ್ಟಿದ್ದಾರೆ. ಎಲ್ಲಾ ಹಣವನ್ನು ಇಲ್ಲಿನ ಅಧಿಕಾರಿಗಳು, ಆಡಳಿತ ಮಂಡಳಿಯವರು ಭ್ರಷ್ಟಚಾರ ನಡೆಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.