ಸಾಹಿತ್ಯ ಸಮ್ಮೇಳನ ಯಶಸ್ವಿಯಲ್ಲಿ ಪೊಲೀಸರು, ಗೃಹ ರಕ್ಷಕ ದಳ ಸಿಬ್ಬಂದಿ ಪಾತ್ರ ಅಪಾರಸಮ್ಮೇಳನದ ಹಿಂದಿನ ದಿನದಿಂದ ಮೊದಲ ದಿನ ಸಮ್ಮೇಳನಾಧ್ಯಕ್ಷರು, ಜಾನಪದ ಕಲಾ ತಂಡಗಳ ಮೆರವಣಿಗೆಯಿಂದ ಆರಂಭವಾದ ಪೊಲೀಸರ ಕರ್ತವ್ಯ ಹಗಲು, ರಾತ್ರಿ, ಬಿಸಿಲು, ಮಳೆ ಎನ್ನದೆ ನಿರಂತರವಾಗಿ ಕೊನೆ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿಯುವರೆಗೂ ಪ್ರತಿಯೊಂದು ವಿಭಾಗಗಳಲ್ಲೂ ಕೆಲವೊಂದು ಗೊಂದಲಗಳನ್ನು ಹೊರತು ಪಡಿಸಿ ಯಾವುದೇ ಲೋಪಗಳು ಆಗದಂತೆ ಕೈಗೊಂಡ ಅಗತ್ಯ ಸೂಕ್ತ ಭದ್ರತಾ ಕ್ರಮಗಳು ಶ್ಲಾಘನೀಯವಾಗಿತ್ತು.