ಶತಾಯುಷಿ ತಮ್ಮಪ್ಪಶೆಟ್ಟರಂತಹ ಅಪರೂಪದ ವ್ಯಕ್ತಿಗಳು ಅಗತ್ಯವಿದೆ: ಬಿ.ನಂಜಪ್ಪದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಿ ಸರಳ ಜೀವನ ನಡೆಸಿ ಪ್ರಗತಿಪರ ಕೃಷಿಕ, ಸಮಾಜಮುಖಿ ಚಿಂತನೆಯೊಂದಿಗೆ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ನೇಕಾರ ಕುರುಹಿನಶೆಟ್ಟಿ ಸಮಾಜದ ನೇತಾರ ತಮ್ಮಪ್ಪಶೆಟ್ಟಿ ಅವರು ಸಾರ್ಥಕ ನೂರು ವರ್ಷಗಳನ್ನು ಸಂಪೂರ್ಣಗೊಳಿಸುತ್ತಿದ್ದಾರೆ.