ಜಮೀನಿನಲ್ಲಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದ ಗಂಡು ಚಿರತೆರೈತ ಯೋಗೇಶ್ ಜಮೀನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪದೇ ಪದೇ ಪ್ರತ್ಯಕ್ಷಗೊಂಡು ಜನರದಲ್ಲಿ ಆತಂಕ ಸೃಷ್ಟಿಸಿತ್ತು. ಜತೆಗೆ ಹಲವು ಕುರಿ, ಮೇಕೆಗಳನ್ನು ಸಹ ಕೊಂದು ತಿಂದು ಹಾಕಿತ್ತು. ಇದರಿಂದ ಸ್ಥಳೀಯರ ರೈತರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಚಿರತೆ ಹೆಜ್ಜೆಗಳು ಪತ್ತೆಯಾಗಿದ್ದವು.