ಶಿಂಷಾ ಬ್ಯಾಂಕ್ ಬಹುಕೋಟಿ ಹಗರಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಎಸ್ಪಿಗೆ ದೂರುಬ್ಯಾಂಕ್ನಲ್ಲಿ ನಡೆದಿರುವ ಹಗರಣದ ಬಗ್ಗೆ ಕಳೆದ 2022 ಆಗಸ್ಟ್ 27ರಂದು ದೂರು ನೀಡಲಾಗಿದೆ. ಈ ಸಂಬಂಧ ಆರೋಪಿಗಳಾದ ಬ್ಯಾಂಕ್‌ನ ಸಿಇಒ ಲಕ್ಷ್ಮಿ ನಾರಾಯಣಗೌಡ, ವ್ಯವಸ್ಥಾಪಕ ಉಮಾಶಂಕರ್, ಕಿರಿಯ ಸಹಾಯಕ ಟಿ. ಗೋಪಿ, ಅಕೌಂಟೆಂಟ್ ಬಿ.ಎನ್. ಕುಮಾರ್ ಅವರು ಬ್ಯಾಂಕ್‌ನ ಹಣ 5,64,40,574 ರು. ದುರುಪಯೋಗ ಪಡಿಸಿಕೊಂಡಿರುವುದು ಆಡಿಟ್ ವರದಿಯಿಂದ ದೃಢಪಟ್ಟಿದೆ.