ಅಭಿವೃದ್ಧಿಯ ದೂರದೃಷ್ಟಿ ಆಡಳಿತಗಾರ ನಾಲ್ವಡಿ: ತಗ್ಗಹಳ್ಳಿ ವೆಂಕಟೇಶ್ಪ್ರಾತ:ಸ್ಮರಣೀಯರಲ್ಲಿ ನಾಲ್ವಡಿಯವರೂ ಒಬ್ಬರಾಗಿದ್ದಾರೆ. ಆಧುನಿಕ ಮೈಸೂರು ರಾಜ್ಯ ನಿರ್ಮಾಣಕ್ಕೆ, ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅಪಾರ. ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ ಸಾಹಿತ್ಯ, ರಾಜಕೀಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿತ್ತು.