ಗುಂಡಾಪುರ ಬೆಟ್ಟದ ಅರಸಮ್ಮ ದೊಡ್ಡ ಜಾತ್ರೆಗೆ ಸಕಲ ಸಿದ್ಧತೆಗುಂಡಾಪುರ ಹಾಗೂ ಹಲಗೂರು ಸೇರಿದಂತೆ ಹೆಚ್. ಬಸಾಪುರ, ಹಗಾದೂರು, ಕೆಂಪಯ್ಯನ ದೊಡ್ಡಿ, ನಂದಿಪುರ, ಬಾಳೆಹೊನ್ನಿಗ, ದಳವಾಯಿ ಕೋಡಿಹಳ್ಳಿ, ಹೊನ್ನಿಗನಹಳ್ಳಿ ಗ್ರಾಮಗಳ ಆರಾಧ್ಯ ದೇವತೆಯಾದ ಬೆಟ್ಟದ ಅರಸಮ್ಮ ಜಾತ್ರೆಯು ಮಾ.20 ರಿಂದ ಪ್ರಾರಂಭಗೊಂಡಿದೆ. ಜಾತ್ರೆಯಲ್ಲಿ ದಿನನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳವಾರ ದೊಡ್ದ ಜಾತ್ರೆ ನಡೆಯುವುದರಿಂದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.