ಚಿಲ್ಲಾಪುರ ಗ್ರಾಮದಲ್ಲಿ ಸಿದ್ದಪ್ಪಾಜಿ ಸ್ವಾಮಿ ಜಾತ್ರಾ ಮಹೋತ್ಸವ ಆರಂಭಮಾ.26 ರಂದು ಬೆಳಗ್ಗೆ 6 ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮತ್ತು ಮಹಾ ಮಂಗಳಾರತಿ ಬೆಳಗಲಿದೆ. ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಕಾದಗಟ್ಟಿಗೆ ಫಲಹಾರ ಪೂಜೆ, ಮಧ್ಯಾಹ್ನ 12 ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆ ಮಜ್ಜನ, ಸೇವೆಯನ್ನು ಏರ್ಪಡಿಸಲಾಗಿದೆ.