ಕನ್ನಡ ಸಂಸ್ಕೃತಿ ಇಲಾಖೆ ಕಚೇರಿಗಷ್ಟೇ ಸೀಮಿತ: ಪ್ರಕಾಶ್ ವಿಷಾದಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎನ್ನುವುದು ಕೇವಲ ಕಚೇರಿಗಷ್ಟೇ ಸೀಮಿತವಾಗಿದೆ. ಅದರಂತೆಯೇ ಅಲ್ಲಿನ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ರಾಮಾಯಣ, ಮಹಾಭಾರತ, ಜಾನಪದದ ಬಗ್ಗೆ ಕಾವ್ಯ ಮತ್ತು ಗದ್ಯದ ರೂಪದಲ್ಲಿ ಪಠ್ಯಪುಸ್ತಕಗಳಲ್ಲಿ ಕೊಡುತ್ತಿದ್ದರು, ಅದನ್ನು ಗುರುಗಳು ಹೇಳುತ್ತಿದ್ದರು. ಇದನ್ನು ಆಲಿಸಿದ ಮಕ್ಕಳಿಗೆ ಸಮಾಜದ ಅರಿವು ಸಿಗುತ್ತಿತ್ತು, ಗುರು ಹಿರಿಯರಲ್ಲಿ ಭಯ ಭಕ್ತಿ ಎನ್ನುವುದು ಇತ್ತು, ಈ ಆಧುನಿಕ ಪ್ರಪಚಂದಲ್ಲಿ ಎಲ್ಲವೂ ಮರೆಯಾಗಿರುವುದು ಬೇಸರ ತರಿಸಿದೆ.