ಸುಭದ್ರ ದೇಶ ಕಟ್ಟುವ ವಾತಾವರಣವನ್ನು ಕಟ್ಟಿಕೊಡಬೇಕಿದೆ: ಜಯಕುಮಾರಿಮಕ್ಕಳಿಗೆ ಮಾನವೀಯ ಸಂಬಂಧಗಳು ಮೌಲ್ಯಗಳನ್ನು ಪ್ರೀತಿಸಿ, ಗೌರವಿಸುವಂತಹ ಗುಣಗಳನ್ನು ಬೆಳೆಸಬೇಕಾಗಿದೆ. ಹಿಂದಿನ ಅವಿಭಾಜ್ಯ ಕುಟುಂಬಗಳಲ್ಲಿ ಎಲ್ಲರು ಒಟ್ಟಾಗಿ ವಾಸಿಸುತ್ತಿದ್ದರು, ಆ ದಿನಗಳಲ್ಲಿ ಧ್ವೇಷ, ಅಸೂಹೆ ಕಡಿಮೆ ಇತ್ತು. ಜನರಲ್ಲಿ ಮಾನವೀಯ ಮೌಲ್ಯಗಳನ್ನು ಕಾಣಬಹುದಾಗಿತ್ತು. ಇದೀಗ ವಿಭಕ್ತ ಕುಟುಂಬಗಳಾಗಿರುವುದರಿಂದ ಜನರಲ್ಲಿ ಮೌಲ್ಯಗಳ ಕೊರತೆ ಹೆಚ್ಚಾಗಿದೆ.