ದೇಶವನ್ನು ಸಂರಕ್ಷಿಸಿಕೊಳ್ಳುವ ಸಂಕಲ್ಪ ಜಾಥಾ ಪ್ರಾರಂಭ: ಡಾ.ರಮೇಶ್ ಬೆಲ್ಲಂಕೊಂಡಪ್ರಸಕ್ತ ಲೋಕಸಭಾ ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯಡಿ ಇರಬೇಕಾ, ಸರ್ವಾಧಿಕಾರಕ್ಕೆ ಒಳಗಾಗಬೇಕಾ ಎಂಬುದನ್ನು ನಿರ್ಧರಿಸುವುದಾಗಿದೆ. ಸಂವಿಧಾನ ವಿರೋಧಿ, ಧರ್ಮಾಂಧ ಬಿಜೆಪಿಯನ್ನು ಸೋಲಿಸುವುದು ಮುಖ್ಯ. ಬಣ್ಣ ಬಣ್ಣದ ಕನಸುಗಳ ಮಹಾಪೂರ ಹರಿಸಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ತನ್ನ ನಿಜ ಬಣ್ಣ ತೋರಿಸಿಕೊಂಡಿದೆ. ಭಾರತ ಅವನತಿ ಅಂಚಿಗೆ ಬಂದು ನಿಂತಿದೆ. ದೇಶವನ್ನು ಸಂರಕ್ಷಿಸಿಕೊಳ್ಳುವ ಸಂಕಲ್ಪ ಜಾಥಾ ಪ್ರಾರಂಭವಾಗಿದೆ.