ಪರಿಸರದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪದಿಂದ ಜಲಕ್ಷಾಮ ಹೆಚ್ಚಳ: ಡಾ.ರವಿಶಂಕರ ಅತೃಪ್ತಿಅಂತರ್ಜಲದ ಅತಿ ಬಳಕೆಯಿಂದ ನೀರಿನ ಮರು ಬಳಕೆ ಮಾಡದೇ ಇರುವುದರಿಂದ ಪ್ರಸ್ತುತ ದಿನಗಳಲ್ಲಿ ತಾಪಮಾನದ ಜೊತೆಗೆ ಅತಿಯಾದ ಜಲಕ್ಷಾಮವನ್ನು ಅನುಭವಿಸುತ್ತೇವೆ. ವಿಪರೀತ ಮರಗಳ ಹನನದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಕೆರೆ, ಕಟ್ಟೆಗಳು, ನದಿಗಳ ಸ್ವರೂಪವನ್ನೇ ಹಾಳು ಮಾಡಿದ್ದು, ನೀರನ್ನು ಹಿತವಾಗಿ ಬಳಕೆ ಮಾಡದಿದ್ದರಿಂದ ಇಂದು ಭೀಕರ ಜಲಕ್ಷಾಮಕ್ಕೆ ಸಾಕ್ಷಿಯಾಗಿದೆ.