ಪವಾಡ ಪುರುಷ ಮಂಟೇಸ್ವಾಮಿ ಮಠದಲ್ಲಿ ನಾಳೆ ಯುಗಾದಿ ಜಾತ್ರೆಪವಾಡ ಪುರುಷ ಶ್ರೀ ಮಂಟೇಸ್ವಾಮಿ ಉತ್ತರ ನಾಡಿನಿಂದ ಬಂದು ಬಿ.ಜಿ.ಪುರದಲ್ಲಿ ಐಕ್ಯವಾಗಿದ್ದು, ಪ್ರತಿವರ್ಷ ಯುಗಾದಿ ಹಬ್ಬದ ಮುನ್ನಾ ದಿನ ಲಕ್ಷಾಂತರ ಮಂದಿ ಭಕ್ತರು ಜನರು ಬಂದು ಮಂಟೇಸ್ವಾಮಿ ಅವರ ಗದ್ದುಗೆ ದರ್ಶನ ಪಡೆಯುತ್ತಾರೆ. ಇದಕ್ಕೆ ಮಠ ನುಗ್ಗುವುದು (ಎದುರುಸೇವೆ) ಎಂದು ಕರೆಯಲಾಗುತ್ತದೆ. ಏ.8ರಂದು ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರು ಮಂಟೇಸ್ವಾಮಿ ಮಠಕ್ಕೆ ಆಗಮಿಸುವ ನಿರೀಕ್ಷೆ ಇದೆ.