ನಾಗರ ಪಂಚಮಿ: ನಾಗರ ವಿಗ್ರಹಗಳಿಗೆ ಚುಂಚಶ್ರೀ ವಿಶೇಷ ಪೂಜೆಶ್ರೀ ಮಠದಲ್ಲಿರುವ 25 ಅಡಿಗೂ ಹೆಚ್ಚು ಎತ್ತರವಿರುವ ನಾಗರ ವಿಗ್ರಹ ಮತ್ತು ಚಿಕ್ಕ ನಾಗರವಿಗ್ರಹಗಳಿಗೆ ಶ್ರೀಗಳು ಅಭಿಷೇಕ, ನೆರವೇರಿಸಿ, ಪೂಜೆ ಸಮರ್ಪಿಸಿದರು. ಹಾಜರಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಧನ್ಯರಾದರು. ಅಲ್ಲದೇ ತೀರ್ಥ ಪ್ರಸಾದ ಸವಿದರು. ನಾಗರಕಲ್ಲಿಗೆ ಪ್ರದಕ್ಷಣೆ ಹಾಕುವ ಮೂಲಕ ಭಕ್ತಿಭಾವ ಸಮರ್ಪಿಸಿದರು. ನಂತರ ಹಾಜರಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.