ಎಸ್ಎಸ್ಎಲ್ಸಿ ಪರೀಕ್ಷೆ: ಪಾಂಡವಪುರ ತಾಲೂಕಿನಿಂದ 2276 ವಿದ್ಯಾರ್ಥಿಗಳು ನೋಂದಣಿಪಾಂಡವಪುರ ತಾಲೂಕಿನಲ್ಲಿ ಒಟ್ಟು 2276 ವಿದ್ಯಾರ್ಥಿಗಳಲ್ಲಿ 1119 ಹೆಣ್ಣು ಮಕ್ಕಳು, 1157 ಗಂಡು ಮಕ್ಕಳಿದ್ದಾರೆ.ಸರಕಾರಿ ಶಾಲೆಯ-1061, ಅನುದಾನಿತ ಶಾಲೆ-467, ಅನುದಾನ ರಹಿತ-511 ಹಾಗೂ ವಸತಿ ಶಾಲೆಯ-237 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಮಂಡಳಿಯ ಸಲಹೆ, ಸೂಚನೆಗಳು ಹಾಗೂ ಮಾರ್ಗದರ್ಶನದಂತೆ ಪ್ರತಿಯೊಬ್ಬ ಶಿಕ್ಷಕರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು.