ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಬಹಿಷ್ಕಾರ ಆರೋಪ; ಸಾಗರೆ ಗ್ರಾಮಕ್ಕೆ ತಹಸೀಲ್ದಾರ್ ಮೋಹನಕುಮಾರಿ ಭೇಟಿಬಹಿಷ್ಕಾರದ ನೆಪವೊಡ್ಡಿ ಕುಡಿಯುವ ನೀರಿಗೆ ಅಡ್ಡಿಪಡಿಸುವುದು, ಅಂಗಡಿಗಳಲ್ಲಿ ಧವಸ ಧಾನ್ಯಗಳನ್ನು ಕೊಡದಿರುವುದು ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ. ಯಾರೂ ಕೂಡ ಯಾರ ವಿರುದ್ಧವೂ ಅವಾಚ್ಯ ಶಬ್ದಗಳ ಬಳಕೆ ಮಾಡಬಾರದು, ಆದರೆ ಗ್ರಾಮಸ್ಥರು ನಮಗೆ ಗೌರವ ಕೊಟ್ಟಿಲ್ಲ. ಮಾತುಕತೆ ಆಡಿಸುವುದಿಲ್ಲ ಎಂಬುದಕ್ಕೆ ಯಾರೂ ಹೊಣೆಯಲ್ಲ, ನಿಮ್ಮ ಗುಣ, ನಡತೆಯನ್ನು ನೋಡಿ ಅವರು ನಿಮಗೆ ಗೌರವ ಕೊಡುತ್ತಾರೆ.